ರೋಹ್‍ತಾಂಗ್ ಕಣಿವೆಮಾರ್ಗವು (ಕಣಿವೆಮಾರ್ಗವನ್ನು ಕೆಟ್ಟ ಹವಾಮಾನದಲ್ಲಿ ಕೆಲಸಮಾಡುತ್ತ ದಾಟಲು ಪ್ರಯತ್ನಿಸುವ ಜನರಿಂದ ಹೆಸರಿಸಲಾಗಿದೆ) ಒಂದು ಎತ್ತರದ ಪರ್ವತ ಕಣಿವೆಮಾರ್ಗವಾಗಿದ್ದು ಹಿಮಾಲಯದ ಪೀರ್ ಪಂಜಾಲ್ ಶ್ರೇಣಿಯ ಪೂರ್ವ ತುದಿಯಲ್ಲಿದೆ. ಮನಾಲಿಯಿಂದ ಸುಮಾರು ೫೧ ಕಿ.ಮಿ. ದೂರದಲ್ಲಿದೆ. ಇದು ಕುಲ್ಲು ಕಣಿವೆಯನ್ನು ಭಾರತದ ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿಟಿ ಕಣಿವೆಗಳೊಂದಿಗೆ ಸಂಪರ್ಕಿಸುತ್ತದೆ. == ಭೌಗೋಳಿಕತೆ == ಈ ಕಣಿವೆಮಾರ್ಗವು ಕುಲ್ಲು ಕಣಿವೆ ಮತ್ತು ಶುಷ್ಕವಾದ ಎತ್ತರದ ಲಾಹೌಲ್ ಹಾಗೂ ಸ್ಪಿಟಿ ಕಣಿವೆಗಳ ನಡುವೆ ನೈಸರ್ಗಿಕ ವಿಭಜನೆಯನ್ನು ಒದಗಿಸುತ್ತದೆ. ಈ ಕಣಿವೆಮಾರ್ಗವು ಚೆನಾಬ್ ಮತ್ತು ಬಿಯಾಸ್ ಜಲಾನಯನ ಪ್ರದೇಶಗಳ ನಡುವಿನ ಜಲಾನಯನ ಪ್ರದೇಶದಲ್ಲಿದೆ. ಹಿಮಾಲಯದ ಮಾನದಂಡಗಳಿಂದ ಇದು ವಿಶೇಷವಾಗಿ ಎತ್ತರ ಅಥವಾ ಕಾಲ್ನಡಿಗೆಯಿಂದ ದಾಟಲು ಕಷ್ಟಕರವಿಲ್ಲ, ಆದರೆ ಅನಿರೀಕ್ಷಿತ ಹಿಮಬಿರುಗಾಳಿಗಳು ಮತ್ತು ಬಿರುಗಾಳಿಗಳ ಕಾರಣ ಇದು ಅಪಾಯಕಾರಿ ಎಂಬ ಯಥಾಯೋಗ್ಯ ಖ್ಯಾತಿಯನ್ನು ಪಡೆದಿದೆ. == ಛಾಯಾಂಕಣ == == ಉಲ್ಲೇಖಗಳು == == ಹೊರಗಿನ ಕೊಂಡಿಗಳು == &